ತಡಸ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:61/2020 ಕಲಂ: 279, 338, 304(A) IPC.
ದಿನಾಂಕ:-07/12/2020 ರಂದು ರಾತ್ರಿ 09-15 ಘಂಟೆಯ ಸುಮಾರು ತಡಸ ಪೊಲೀಸ್ ಠಾಣಾ ವ್ಯಾಪ್ತಿ ತಡಸ ಕಡೆಯಿಂದ ಹಾನಗಲ್ಲ ಕಡೆಗೆ ಹೋದ ರಸ್ತೆಯ ಮೇಲೆ ಕುನ್ನೂರ ಗ್ರಾಮದ ಸಮೀಪ ಕಸ್ತೂರ ಬಾ ಹಾಸ್ಟೇಲ್ ಹತ್ತಿರ ರಸ್ತೆಯ ಮೇಲೆ ಚಂದ್ರಶೇಖರ ಶಿವಪ್ಪ ಬಡಿಗೇರ ಸಾ|| ದುಂಡಸಿ ಇವರು ತಾನು ನಡೆಸುತ್ತಿದ್ದ ಮೋಟಾರ ಸೈಕಲ ನಂಬರ: ಕೆಎ-27/ಇಕ್ಯೂ-0083 ನೇದ್ದನ್ನು ತಡಸ ಕಡೆಯಿಂದ ದುಂಡಶಿ ಕಡೆಗೆ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಜನರ ಪ್ರಾಣಕ್ಕೆ ಅಪಾಯವಾಗುವಂತೆ ನಡೆಸಿಕೊಂಡು ಹೋಗುವಾಗ ಮೋಟಾರ ಸೈಕಲನ್ನು ನಿಯಂತ್ರಿಸದೇ ರಸ್ತೆಯ ಮೇಲೆ ಕೆಡವಿ ಅಪಘಾತ ಪಡಿಸಿ, ಮೋಟಾರ ಸೈಕಲದಲ್ಲಿ ತನ್ನ ಹಿಂದೆ ಕುಳಿತ್ತಿದ್ದ ಬಸವರಾಜ ಶಿವಲಿಂಗಪ್ಪ ಕೌದಿ @ ಕೌದಿಶೆಟ್ಟರ ಸಾ|| ದುಂಡಶಿ ಇವನಿಗೆ ತಲೆಗೆ, ಮುಖಕ್ಕೆ, ಕೈ ಕಾಲುಗಳಿಗೆ ಬಲವಾದ ಗಾಯಪೆಟ್ಟು ಪಡಿಸಿದ್ದು, ಉಪಚಾರಕ್ಕೆ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಹೊಂದುವಾಗ ಉಪಚಾರ ಫಲಿಸದೇ ದಿನಾಂಕ: 13/12/2020 ರಂದು 08-00 ಘಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:83/2020 – ಮಹಿಳೆ ಕಾಣೆ.
ಉಮಾ ತಂದೆ ಸದಾಶಿನಗೌಡ ಉಜ್ಜನಗೌಡ್ರ, 22 ವರ್ಷ 2 ತಿಂಗಳು ಇವಳು ದಿನಾಂಕ : 12-12-2020 ರಂದು ಮದ್ಯಾಹ್ನ 3-15 ಗಂಟೆ ಸುಮಾರಿಗೆ ಲಲಿತಾ ಇವರ ಮುಂದೆ ಆಫೀಸಿಗೆ ಮತ್ತು ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೊ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಈವರಿಗೂ ಹುಡುಕಾಡಿದ್ದು ಸಿಗದಿದ್ದ ಕಾರಣಕ್ಕೆ ಕಾಣೆಯಾದ ಉಮಾ ಇವರನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:308/2020 – ಕಲಂ: 323, 353, 307, 504, 506, 34 IPC.
ದಿನಾಂಕ 14-12-2020 ರಂದು ಬೆಳಗಿನ 02-00 ಗಂಟೆಗೆ ಸುಮಾರಿಗೆ ಕ್ಯಾಂಟರ ಲಾರಿ ನಂ ಕೆಎ-21/ಡಿ-9952 ಮತ್ತು ಕೇಸರಿ ಬಣ್ಣ ಸ್ವರಾಜ ಮಡ್ಜಾ ಕ್ಯಾಂಟರಗಳ ಚಾಲಕ ವ ಮಾಲಿಕ ಇವನು ಮೇಡ್ಲೇರಿ ಗ್ರಾಮದ ಹದ್ದಿಯಲ್ಲಿ ಬರುವ ತುಂಗಭದ್ರ ನದಿ ಪಾತ್ರದಲ್ಲಿ ಸರಕಾರ ಖಣಿ ಸ್ವತ್ತಾದ ಮರಳನ್ನು ಯಾವುದೇ ಪಾಸ್ ವ ಪರ್ಮೇಟ್ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ತಮ್ಮ ಕ್ಯಾಂಟರ ಗಾಡಿಯಲ್ಲಿ ಸುಮಾರು 2700 ರೂ ಕಿಮ್ಮತ್ತಿನ ಮೂರು ಕ್ಯೂಬಿಕ್ ಮೀಟರ ಮರಳನ್ನು ಒಟ್ಟು 5400/- ರೂ ಬೆಲೆ ಬಾಳುವ 6 ಕ್ಯೂಬಿಕ್ ಮರಳನ್ನು ಅನಧಿಕೃತವಾಗಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಕಾಲಕ್ಕೆ ಪಿ ಎಸ್ ಐ ಹಾಗೂ ಸಿಬ್ಬಂದಿ ಜನರು ಸೇರಿ ದಾಳಿಮಾಡಿದ ಕಾಲಕ್ಕೆ ಸ್ಥಳದಲ್ಲಿ ತನ್ನ ಗಾಡಿಯನ್ನು ಬಿಟ್ಟು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕುಮಾರಪಟ್ಟಣಂ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2020 – ವ್ಯಕ್ತಿ ಸಾವು.
ಗಂಗಾಧರ ವಾಸ:ದಾವಣಗೇರಿ ಸುಮಾರು 50-55 ವರ್ಷದವನು (ಸಂಪೂರ್ಣ ಹೆಸರು ವಿಳಾಸ ತಿಳಿದಿರುವದಿಲ್ಲಾ) ಇವರು ಸುಮಾರು 8-10 ತಿಂಗಳಿನಿಂದ ಕುಮಾರಪಟ್ಟಣಂ ಚೆಕ್ ಪೋಸ್ಟದಲ್ಲಿ ಹಾಗೂ ಕೋಡಿಯಾಲ ಹೊಸಪೇಟೆಯಲ್ಲಿ ಅಲ್ಲಿ, ಇಲ್ಲಿ ಹೋಟೆಲ್ ಗಳಲ್ಲಿ ಬಿಕ್ಷೆ ಬೇಡುತ್ತಾ ಊಟ ತಿಂಡಿ ತಿನ್ನುತ್ತಾ ಕುಮಾರಪಟ್ಟಣಂ ಚೆಕ್ ಪೋಸ್ಟಲ್ಲಿ ಜಾಗ ಸಿಕ್ಕ ಕಡೆ ಮಲಗುತ್ತ್ತಾ ಇದ್ದವನು ಅನಾರೋಗ್ಯದಿಂದ ಬಳಲುತ್ತಿದ್ದು, ಸದರಿಯವನು ದಿನಾಂಕ:13/12/2020 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ:14/12/2020 ರಂದು ಮುಂಜಾನೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಕುಮಾರಪಟ್ಟಣಂ ಚೆಕ್ ಪೋಸ್ಟದಲ್ಲಿರುವ ರಸ್ತೆಯ ಡಿವಾಯಡರ್ ಹತ್ತಿರ ತನಗಿದ್ದ ಯಾವುದೋ ಕಾಯಿಲೆಯಿಂದ ಬಳಲಿ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬಂಕಾಪುರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:23/2020 – ಮಹಿಳೆ ಸಾವು.
ದಿನಾಂಕ: 14-12-2020 ರಂದು ಬೆಳಗಿನ ಜಾವ 02.00 ಗಂಟೆ ಸುಮಾರಿಗೆ ನಾಜ್ಮೀನ ಕೊಂ ಮಲ್ಲಿಕಾರ್ಜುನ ಬಾಗಲಕೋಟಿ ವಯಾ 30 ವರ್ಷ ಜಾತಿ:ಮುಸ್ಲಿಂ ಉದ್ಯೋಗ: ಮನೆ ಕೆಲಸ ಸಾ|| ಬಂಕಾಪೂರ ಅಹ್ಮದ ನಗರ ಇವಳು ಮೃತಹೊಂದಿದ್ದು ಹಾಗೂ ಕುತ್ತಿಗೆ ಹತ್ತಿರ ಉರಲುಹಾಕಿದಾಗ ಆಗುವ ತರ ಮಾರ್ಕ ಆಗಿದ್ದು ಇವಳ ಸಾವಿನ ಬಗ್ಗೆ ಅವಳ ಗಂಡನ ಮನೆಯವರು ಸರಿಯಾಗಿ ವಿಷಯ ಹೇಳಿರುವುದಿಲ್ಲಾ ಕಾರಣ ಅವಳ ಸಾವಿನಲ್ಲಿ ನಮಗೆ ಸಂಶಯ ಇದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮೃತಳ ಸಹೋದರಿ ಸಾಯದಾಸಾಬ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ತಿತ್ಯ ತನಿಖೆ ಕೈಗೊಳ್ಳಲಾಗಿದೆ.
© 2017 Haveri District Police. All rights reserved