ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:141/2020 ಕಲಂ: 171(H) IPC.
2020ನೇ ಸಾಲಿನ ಗ್ರಾಮ ಪಂಚಾಯತ ಚುನಾವಣೆಗೆ, ಮುದೇನೂರ ಗ್ರಾಮದ ವಾರ್ಡ ನಂ: 02ನೇದ್ದರಲ್ಲಿ ಸ್ಪರ್ದಿಸಿರುವ ಉಮೇದುದಾರರಾದ 1) ನಾಗರಾಜಯ್ಯ ಬಿಳಸನೂರಮಠ. 2) ಫಕ್ಕೀರಪ್ಪ ತರೇದಹಳ್ಳಿ. 3) ರೇಖಾ ಜಮಾಲಣ್ಣನವರ. ಸಾ|| ಮೂವರೂ ಮುದೇನೂರ ಇವರುಗಳು, ಗ್ರಾಮ ಪಂಚಾಯತ ಚುನಾವಣೆಯಲ್ಲಿ ಯಾವುದೇ ರಾಷ್ಟ್ರೀಯ/ಪ್ರಾದೇಶಿಕ ಪಕ್ಷಗಳ ಚಿನ್ಹೆ ಮತ್ತು ನಾಯಕರ ಭಾವಚಿತ್ರವನ್ನು ಬಳಸಲು ನಿರ್ಬಂಧವಿದೆ ಅಂತಾ ತಿಳಿದೂ ಸಹಾ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ರಾಷ್ಟ್ರೀಯ ಪಕ್ಷವಾದ ಬಿ.ಜೆ.ಪಿ ಪಕ್ಷದ ಚಿನ್ಹೆ ಮತ್ತು ಪಕ್ಷದ ನಾಯಕರ ಭಾವಚಿತ್ರಗಳನ್ನು ಹೊಂದಿರುವ ಭಿತ್ತಿ ಪತ್ರಗಳನ್ನು ಮುದ್ರಿಸಿ ಗ್ರಾಮದ ಗ್ರಾಮ ಪಂಚಾಯತ ಆಫೀಸ್ ಹತ್ತಿರ ಬರುವ ಮಾರ್ಗಸೂಚಿ ಫಲಕಕ್ಕೆ ಸಾರ್ವಜನಿಕರಿಗೆ ಕಾಣುವಂತೆ ಅಂಟಿಸಿ ಪ್ರದರ್ಶಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ಮೂರೂ ಜನರ ಮೇಲೆ ಕ್ರಮ ಕೈಗೊಳ್ಳಲು ವಿನಂತಿ ಅಂತಾ ನಮೂದಿದ್ದುದನ್ನು ಪಡೆದುಕೊಂಡು ಠಾಣೆಯಲ್ಲಿ N C No: 40/2020 ಕಲಂ: 171 (H) IPC ನೇದ್ದರಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:221/2020 – ಕಲಂ: 379 IPC.
ಸಹದೇವಪ್ಪ ಪುಜಾರ ಸಾ|| ಚಿಕ್ಕೆರಿಹೋಸಳ್ಳಿ ಇವರು ದಿನಾಂಕ; 07-12-2020 ರಂದು ಮದ್ಯಾಹ್ನ 03-30 ಘಂಟೆಯಿಂದ ಸಾಯಂಕಾಲ 04-30 ಘಂಟೆಯ ನಡುವಿನ ಅವಧಿಯಲ್ಲಿ ಹಾನಗಲ್ಲ ತಾಲೂಕ ಚಿಕ್ಕೇರಿ ಹೋಸಳ್ಳಿ ಗ್ರಾಮದ ಶಿಬಾರದ ಹತ್ತಿರ ನಿಲ್ಲಿಸಿದ್ದ ಹೀರೊ ಹೆಚ್ ಎಪ್ ಡಿಲಕ್ಸ್ ತಿಳಿ ನೀಲಿ ಬಣ್ಣದ ಮೋಟಾರ್ ಸೈಕಲ್ಲ ನಂಬರ ಕೆಎ-27/ಇಕೆ-4198 ಇಂಜಿನ್ ನಂಬರ HA11ENH9G29077 ಚೆಸ್ಸಿ ನಂ-MBLHAR238H9G55321 ಅ;ಕಿ;20,000/- ರೂಗಳು ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
© 2017 Haveri District Police. All rights reserved