ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:178/2020 ಕಲಂ: 279, 337, 304(A) IPC.
ಹುಲ್ಲಪ್ಪ ತಂದೆ ಕಾಶಪ್ಪ ಜಾಡರ ಇವನು ದಿನಾಂಕ : 16-12-2020 ರಂದು ಮದ್ಯಾಹ್ನ 03 ಘಂಟೆ ಸುಮಾರಿಗೆ ಮೋಟಾರ್ ಸೈಕಲ್ ನಂಬರ್ ಕೆ,ಎ-27 ಇ.ಪಿ-3670 ನೇದರ ಹಿಂಬದಿ ಕುಳಿತುಕೊಂಡು ಶಂಕ್ರೀಕೊಪ್ಪ ಗ್ರಾಮದಿಂದ ಕುಣಿಮೆಳ್ಳಳ್ಳಿ ಗ್ರಾಮಕ್ಕೆ ಅಂತಾ ಕೂಡಲ-ಹರವಿ ರಸ್ತೆ ಸೇತುವೆಯಿಂದ ಸ್ವಲ್ಪ ಹಿಂದೆ ರಸ್ತೆ ಮೇಲೆ ಹೋಗುತ್ತೀರುವಾಗ ಸದರ ಮೋಟಾರ್ ಸೈಕಲ್ ಸವಾರನಾದ ಚನ್ನಬಸಪ್ಪ ತಂದೆ ನಿಂಗಪ್ಪ ಕಿರವಾಡಿ ಸಾ||ತುಮರಿಕೊಪ್ಪ ತಾ||ಹಾನಗಲ್ಲ ಇವನು ತಾನೂ ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ಅತಿ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿಳುವಂತೆ ಮಾಡಿಕೊಂಡು ತನಗೆ ಮೈ ಕೈ ಮೇಲೆ ತೆರಚಿದ ಘಾಯ ನೋವು ಆಗುವಂತೆ ಮಾಡಿಕೊಂಡಿದ್ದು ಅಲ್ಲದೆ ಹುಲ್ಲಪ್ಪ ಇವರ ತಲಗೆ ಬಲವಾದ ಪೆಟ್ಟು ಬಿದ್ದು ಚಿಕೀತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚೀಕಿತ್ಸೆ ಪಡೆಯುತ್ತಿರುವಾಗ ಚಿಕೀತ್ಸೆ ಪಲಕಾರಿಯಾಗದೆ ಸಂಜೆ 06 ಘಂಟೆ ಸುಮಾರಿಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:222/2020 – ಕಲಂ: 506,34,323,324,504,447 IPC.
ಹಾನಗಲ್ಲ ಪಿ.ಎಸ್.ಹದ್ದಿ ಪೈಕಿ ಹೀರೂರ ಗ್ರಾಮದ ಜಮೀನು ರಿ.ಸ ನಂ.343 ನೇದ್ದರಲ್ಲಿ ದಿನಾಂಕಃ 13/12/2020 ರಂದು ಸಾಯಂಕಾಲ:05-00 ಗಂಟೆಯ ಸುಮಾರಿಗೆ ಸಯ್ಯದಇಸ್ಮೈಲ್ ಕಾಜಾಮೊದಿನಸಾಬ ಸಾ|| ಸಾವಿಕೇರಿ ಹಾಗೂ ಇವರ ಸಹಚರರು ಸೇರಿಕೊಂಡು ಭತ್ತದ ಹುಲ್ಲನ್ನು ಟ್ರಾಕ್ಟರ ಟ್ರೇಲರಗೆ ತುಂಬುತ್ತಿದ್ದಾಗ ಮಹಬೂಬಅಲಿ ಇಮಾಮಸಾಬ ಹೊಂಡದ ಹಾಗೂ ಇವರ ಸಹೋದರ ಕೂಡಿಕೊಂಡು ಬಂದವರೇ ಸಯ್ಯದಇಸ್ಮೈಲ್ ಹಾಗೂ ಇವರ ಸಹಚರರಿಗೆ ಅವಾಚ್ಯವಾಗಿ ಬೈದಾಡುತ್ತಿದ್ದಾಗ ಮೆಹಬೂಬಲಿ ಈತನು ಲೇ ನಿಮೌರ ನಿಮ್ಮದು ಬಾಳ ಆಗೈತಿ ಅಂತಾ ಅನ್ನುತ್ತಾ ಅಲ್ಲಿಯೇ ಇದ್ದ ಒಂದು ಹಿಡಿಗಾತ್ರದ ಬಡಿಗೆಯನ್ನು ತೆಗೆದುಕೊಂಡವನೇ ಅಬ್ದುಲರಜಾಕ ತಂದೆ ಅಬ್ದುಲಗನಿಸಾಬ ಇನಾಮದಾರ ಈತನ ತಲೆಗೆ ಹೊಡೆದು ರಕ್ತ ಗಾಯ ಮಾಡಿದ್ದು ಅಲ್ಲದೇ ನಿಮ್ಮನ್ನು ಇವತ್ತು ಬಿಡಲ್ಲಾ ಅಂತಾ ಅನ್ನುತ್ತಾ ಅದೇ ಕಟ್ಟಿಗೆಯ ಬಡಿಗೆಯಿಂದ ಸಯ್ಯದಅಹ್ಮದ ತಂದೆ ಹಸನಷಾ ಮುಲ್ಲಾ ಈತನ ಕಡೆಗೆ ಬೀಸಿದಾಗ ಅದು ಅವನ ತಲೆಯ ನೆತ್ತಿಯ ಕಡೆಗೆ ಏಟು ಬಿದ್ದು ರಕ್ತ ಗಾಯಪಡಿಸಿದಾಗ, ಮಹ್ಮದಇಸಾಕಸಾಬ ತಂದೆ ಇಮಾಮಸಾಬ ಹೊಂಡದ ಈತನೂ ಸಹ ಒಂದು ಹಿಡಿಗಾತ್ರದ ಬಡಿಗೆಯನ್ನು ತೆಗೆದುಕೊಂಡವನೇ ಅಬ್ದುಲಖಾದರ ತಂದೆ ಮಹ್ಮದಜಾಫರಸಾಬ ಇನಾಮದಾರ ಈತನ ತಲೆಯ ಬಲಗಡೆ ಭಾಗಕ್ಕೆ ಹೊಡೆದು ರಕ್ತ ಗಾಯಮಾಡಿದ್ದು ಅಲ್ಲದೆ ಇನ್ನೊಮ್ಮೆ ಸಿಗ್ರಿ ನಿಮ್ಮನ್ನು ಇದೇ ಜಮೀನಿನಲ್ಲಿ ಜೀವಂತ ಹುಗಿದು ಬಿಡುತ್ತೇವೆ ಅಂತಾ ಜೀವದ ಧಮಕಿ ಹಾಕುತ್ತಾ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:38/2020 – ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.
ಈರಪ್ಪ ತಂದೆ ಸಂಗಪ್ಪ ಲಗಿಬಗಿ ವಯಾ 67 ವರ್ಷ, ಸಾ||ಐರಣಿ ತಾ||ರಾಣೇಬೆನ್ನೂರ ಇವನು ಪ್ರತಿ ದಿನ ಸರಾಯಿ ಕುಡಿಯವ ಚಟವನ್ನು ಮಾಡುತ್ತಾ ಬಂದಿದ್ದು ಅಲ್ಲದೇ ಇತ್ತೀಚಿಗೆ ಕಿವಿ ನೋವು ಬರುತ್ತಿದ್ದು ಸದರಿ ನೋವಿಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ತೋರಿಸಿದ್ದು ದಿನಾಂಕಃ13-12-2020 ರಂದು 19-00 ಗಂಟೆ ಸುಮಾರಿಗೆ ತನ್ನ ಕಿವಿ ನೋವು ಬಾದೆಯನ್ನು ತಾಳಲಾರದೇ ಸರಾಯಿ ಕುಡಿದ ನಸೆಯಲ್ಲಿ ಹೊಲಕ್ಕೆ ಹೊಡೆಯುವ ಕ್ರಿಮಿನಾಶಕ ಔಷದಿಯನ್ನು ಕುಡಿದು ಹರಿಹರ ಸರ್ಕಾರಿ ಆಸ್ಪತ್ರೆ ಮತ್ತು ದಾವಣಗೆರೆ ಸಿ.ಜೆ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಹೆಚ್ಚಿನ ಉಪಚಾರಕ್ಕೆ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ಉಪಚಾರ ಪಡೆದುಕೊಳ್ಳುವ ಕಾಲಕ್ಕೆ ಉಪಚಾರ ಫಲಕಾರಿಯಾಗದೇ ದಿನಾಂಕಃ16-12-2020 ರಂದು ಮುಂಜಾನೆ 2-30 ಗಂಟೆಗೆ ಮೃತ ಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:39/2020 – ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ.
ಹನುಮಂತಪ್ಪ ಚೋಳಪ್ಪ ಕಂಬಳಿ ವಯಾ: 40 ಸಾ|| ರಾಣೆಬೇನ್ನೂರ ಇವರು ಒಕ್ಕಲುತನ ಮಾಡುತ್ತಾ ಉಪಜೀವನ ಸಾಗಿಸುತ್ತಿದ್ದು ಒಕ್ಕಲುತನದ ಉದ್ದೇಶಕ್ಕೆ ಸಾಲವನ್ನು ಮಾಡಿದ್ದು ಅದನ್ನು ತೀರಿಸುವದು ಆಗಲಿಲ್ಲ ಅಂತಾ ಜೀವನದಲ್ಲಿ ಜಿಗುಪ್ಸೆಹೊಂದಿ ದಿ: 16-12-2020 ರಂದು 06-00 ಗಂಟೆಯಿಂದ ಮಧ್ಯಾಹ್ನ: 3-00 ಗಂಟೆ ಮಧ್ಯದಲ್ಲಿ ಹನುಮಾಪುರ ಗ್ರಾಮದ ಕೆರೆಯಲ್ಲಿ ಹಾರಿ ಆತ್ಮಹತ್ಯ ಮಾಡಿಕೊಂಡಿರುತ್ತಾರೆ ಹೊರತು ಅವರ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:39/2020 – ಹಾವು ಕಡಿತದಿಂದ ವ್ಯಕ್ತಿ ಸಾವು.
ಶಿವಪ್ಪ ತಂದೆ ಶಂಕ್ರಪ್ಪ ಕಾಯಕದ ವಯಾ: 65 ವರ್ಷ ಜಾತಿ:ಲಿಂಗವಂತ ಉದ್ಯೋಗ: ಶೇತ್ಕಿ ಕೆಲಸ ಸಾ|| ಬ್ಯಾಡಗಿ ಹೊಂಡದ ಓಣಿ ಇವರು ದಿನಾಂಕ; 08-12-2020 ರಂದು ಮದ್ಯಾನ 2-15 ಗಂಟೆಗೆ ತಮ್ಮ ಜಮೀನು ರಿ.ಸ.ನಂ. 479 ನೇದ್ದರಲ್ಲಿ ಕಸವನ್ನು ಕೀಳುವಾಗ ಯಾವುದೋ ವಿಷಕಾರಕ ಹಾವು ಕಡಿದಿದ್ದು ಸದರಿಯವನಿಗೆ ಉಪಚಾರಕ್ಕೆ ಬ್ಯಾಡಗಿ ಸರಕಾರಿ ಆಸ್ಪತ್ರೆಗೆ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ದಾವಣಗೇರಿ ಆರೈಕೆ ಆಸ್ಪತ್ರೆಗೆ ಅಲ್ಲಿಂದ ಬಾಪೂಜಿ ಆಸ್ಪತ್ರಗೆ ಉಪಚಾರಕ್ಕೆ ದಾಖಲ ಮಾಡಿದಾಗ ಉಪಚಾರದಿಂದ ಗುಣವಾಗದೆ ದಿನಾಂಕ: 15-12-2020 ರಂದು ರಾತ್ರಿ 8-00 ಗಂಟೆಗೆ ಮರಣ ಹೊಂದಿರುತ್ತಾರೆ ಅಂತಾ ಮಂಜುನಾಥ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
© 2017 Haveri District Police. All rights reserved