ರಟ್ಟಿಹಳ್ಳಿ ಪೊಲೀಸ್
ಠಾಣೆ ಅಪರಾಧ ಸಂಖ್ಯೆ:129/2020 ಕಲಂ: 379
IPC.
ಚಂದ್ರಶೇಖರಯ್ಯ ಹುಚ್ಚಯ್ಯ ಮಠದ ಸಾ||ಕವಳಿಕುಪ್ಪಿ ಇವರು ತನ್ನ ಬಾಬತ್ ರಾಯಲ್ ಎನ್ಫೀಲ್ಡ ಬೈಕ ನಂಬರ ಕೆಎ: 68/ಹೆಚ್: 1947 ಇದರ
ಚಾಸ್ಸಿ ನಂಬರ: ME3U3S5C2KC492205 ಇಂಜಿನ್
ನಂಬರ: U3S5C2KC474160 ಅ;ಕಿ; 100.000/ ರೂ. ನೇದ್ದನ್ನು, ಕವಳಿಕುಪ್ಪಿ ಗ್ರಾಮದ ತಮ್ಮ ಮನೆ ಮುಂದೆ ನಿಲ್ಲಿಸಿ
ಮನೆಯಲ್ಲಿ ಮಲಗಿದ್ದಾಗ ದಿನಾಂಕ: 20/12/2020 ರಂದು ಬೆಳಗಿನ ಜಾವ 01-00 ಗಂಟೆಯಿಂದ
ಮುಂಜಾನೆ 06-30 ಗಂಟೆ
ಮಧ್ಯದ ಅವಧಿಯಲ್ಲಿ, ಸದರ
ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:135/2020 ಕಲಂ: 380,454
IPC.
ಶಿಗ್ಗಾಂವ ಶಹರದ ಶಾದಿಮಹಲನಲ್ಲಿ ಚಂದ್ರಶೇಖರ ಮಾರುತೆಪ್ಪ ಕೊರಪಡೆ ಸಾ|| ಶಿಗ್ಗಾವಿ ಇವರ ಮಗನದ್ದು ದಿನಾಂಕ : 18-12-2020 ರಂದು ವಲಿಮಾ ಕಾರ್ಯಕ್ರಮವಿದ್ದು ಆ ಕಾಲಕ್ಕೆ ಚಂದ್ರಶೇಖರ ಇವರ ಅಳಿಯ ಮತ್ತು ಮಗಳಿಗೆ ಉಡುಗೊರೆ ಕೊಡಲು ಅಂತಾ ತಂದಿದ್ದ ಒಂದು ರೂಬಿ ಹರಳುಗಳ ನಕ್ಲೇಸ ಒಟ್ಟು ತೂಕ :24.830 ಮೀಲಿ ಅ.ಕಿ:1,18,658 ರೂ ಮತ್ತು ಒಂದು ಉಂಗುರ ಒಟ್ಟು ತೂಕ :08 ಗ್ರಾಂ ಅ;ಕಿ 30.000/- ರೂ ಗಳ ಕಿಮತ್ತಿನ ಆಬರಣಗಳನ್ನು ಬ್ಯಾಗಿನಲ್ಲಿ ಇಟ್ಟು ಶಾದಿಮಹಲದಲ್ಲಿ ಕೊಟ್ಟಿದ್ದ ರೂಂನಲ್ಲಿ ಇಟ್ಟಿದ್ದಾಗ ಮದ್ಯಾಹ್ನ 03.00 ಗಂಟೆಯಿಂದ 04.00 ಗಂಟೆಯ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡ ಹೋಗಿದ್ದು ಠಾಣೆಯಲ್ಲಿ
ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ:150/2020 ಕಲಂ: 171F IPC.
ದಿನಾಂಕ: 22-12-2020
ರಂದು ಗ್ರಾಮ ಪಂಚಾಯತ ಚುನಾವಣೆ ಕಾಲಕ್ಕೆ ರುದ್ರಪ್ಪ ತಂದೆ ಶಿವಾನಂದಪ್ಪ ಡಾವಣಗೇರಿ ಸಾ||ಕರ್ಜಗಿ ತಾ|| ಹಾವೇರಿ ಇತನು ಕರ್ಜಗಿ ಗ್ರಾಮ ಪಂಚಾಯತಿಯ ಕರ್ಜಗಿ ಸರಕಾರಿ ಪ್ರೌಢ ಶಾಲೆ ಪಶ್ಚಿಮ ಭಾಗದ ಮತಗಟ್ಟೆ ಸಂಖ್ಯೆ 65ಎ ನೇದ್ದಕ್ಕೆ ಮದ್ಯಾಹ್ನ 03-40 ಗಂಟೆಗೆ ಮತದಾನ ಮಾಡಲು ಹೋಗಿ, ಪ್ರಿಸೈಡಿಂಗ್ ಅಧಿಕಾರಿಯಿಂದ ಮತ ಪತ್ರವನ್ನು ಪಡೆದು ಮತ ಹಾಕಲು ವೋಟಿಂಗ್ ಕಂಪಾರ್ಟಮೆಂಟಿಗೆ ತೆರಳಿ ಮತ ಹಾಕಿ, ಮತ ಪತ್ರವನ್ನ ಹರಿದು ಮತಪೆಟ್ಟಿಗೆ ಒಳಗೆ ಹಾಕಲು ಪ್ರಯತ್ನಿಸಿ ಅನುಚಿತವಾಗಿ ವರ್ತಿಸಿದ್ದು
ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:182/2020 ಕಲಂ: 171F IPC
ಕು|| ನಾಗಮ್ಮ ತಂದೆ ದುಂಡಪ್ಪ ಮೆಳ್ಳಳ್ಳಿ ವಯಾ;24 ವರ್ಷ ಜಾತಿ:ಹಿಂದೂ ಗಂಗಾಮತ ಉದ್ಯೋಗ:ಮನೆ ಕೆಲಸ ಸಾ||ಆಡೂರ ತಾ|| ಹಾನಗಲ್ಲ ಇವಳು ದಿನಾಂಕ: 16/12/2020 ರಂದು ಸಂಜೆ 17-00 ಗಂಟೆ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯಾರಿಗು ಹೇಳದೆ ಕೇಳದೆ ಮನೆಯಿಂದಾ ಹೋದವಳು ವಾಪಸ್ಸ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಈ ಬಗ್ಗೆ ತಮ್ಮ ಊರಲ್ಲಿ ಹಾಗೂ ತಮ್ಮ ಸಂಬಂಧಿಕರ ಊರುಗಳಲ್ಲಿ ಈವರೆಗೆ ತಮ್ಮ ಮಗಳಿಗೆ ಹುಡುಕಾಡಿದರು ಸಹಾ ಪತ್ತೆ ಆಗದೆ ಇರುವುದರಿಂದ ಕಾಣೆಯಾದ ನಾಗಮ್ಮನನ್ನು ಹುಡುಕಿಕೊಡಬೇಕೆಂದು ನಾಗಮ್ಮನ ತಂದೆ ದುಂಡಪ್ಪ ಠಾಣೆಯಲ್ಲಿ ಪಿರ್ಯಾದಿ ನೀಡಿದ್ದು, ಠಾಣೆಯಲ್ಲಿ ಪಿರ್ಯಾದಿ ಸ್ವಿಕರಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.
ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:37/2020 ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ.
ಶ್ರೀಮತಿ ರೋಧಾ ಇವಳು ಸುಮಾರು 6-7 ವರ್ಷಗಳಿಂದ ಹೊಟ್ಟೆನೋವಿನ ಖಾಯಿಲೆಯಿಂದ ಬಳಲುತ್ತಿದ್ದು, ಅದು ಪೂರ್ಣ ಗುಣಮುಖವಾಗದ್ದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನಷ್ಟಕ್ಕೆ ತಾನೇ ದಿನಾಂಕ: 22-12-2020 ರಂದು ತನ್ನ ವಾಸದ ಮನೆಯ ಬಾತ್ ರೂಮ್ ದಲ್ಲಿರುವ ಆರ್ ಸಿ ಸಿ ಗೆ ಹಾಕಿರುವ ಕಬ್ಬಿಣದ ಹುಕ್ಕಿಗೆ ವೇಲ್ ಸಹಾಯದಿಂದ ನೇಣುಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಹೊರತು ಅವಳ ಸಾವಿನಲ್ಲಿ ಯಾವುದೇ ಸಂಶೆಯ ಇರುವುದಿಲ್ಲ ಅಂತಾ ಯಲ್ಲಮ್ಮ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.© 2017 Haveri District Police. All rights reserved