ಕುಮಾರಪಟ್ಟಣಂ ಪೊಲೀಸ್
ಠಾಣೆ ಅಪರಾಧ ಸಂಖ್ಯೆ:92/2020 ಕಲಂ: INDIAN
MOTOR VEHICLES ACT, 1988 (U/s-134(A&B),187); 279,304(A) IPC.
ದಿನಾಂಕ:24/12/2020 ರಂದು ಮದ್ಯಾಹ್ನ 3-45 ಗಂಟೆಯ ಸುಮಾರಿಗೆ ಚನ್ನಬಸಪ್ಪ ತಂದೆ ಗೋಣಿಬಸಪ್ಪ ವಗ್ಗರಣಿ ವಯಾ: 65 ವರ್ಷ ಜಾತಿ: ಹಿಂದೂ ಉಪ್ಪಾರ ಉದ್ಯೋಗ: ವ್ಯವಸಾಯ
ವಾಸ:ಕವಲೆತ್ತು ತಾ||ರಾಣೇಬೆನ್ನೂರ ಇವರು ತಮ್ಮ ಟಿ ವಿ ಎಸ್ ಎಕ್ಸ ಎಲ್ ಮೋಟಾರ ಸೈಕಲ್ ನಂಬರ:ಕೆಎ:27/ಎಲ್-578 ರಲ್ಲಿ ಹರಿಹರ ಸಮ್ಮಸಗಿ ರಸ್ತೆಯ ಮೇಲೆ ಎಣ್ಣಿಹೊಸಳ್ಳಿ ಕಡೆಯಿಂದ ಹರಿಹರದ ಕಡೆಗೆ ಶಂಕರ ಢಾಭಾ ಹತ್ತಿರ ಬರುವಾಗ ಅಶೋಕ್ ಲೈಲೆಂಡ್ ಪಿಕ್ ಅಪ್ ವಾಹನ ನಂಬರ:ಕೆಎ:17-ಡಿ-4246 ರ ಚಾಲಕನು ತನ್ನ ವಾಹನವನ್ನು ದಾವಣಗೇರಿ-ರಾಣೇಬೆನ್ನೂರ ಎನ್ ಎಚ್ 04 ರಸ್ತೆಯ ಮೇಲೆ ದಾವಣಗೇರಿ ಕಡೆಯಿಂದ ರಾಣೇಬೆನ್ನೂರ ಕಡೆಗೆ
ಅತೀ ಜೋರಿನಿಂದ, ನಿರ್ಲಕ್ಷತದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ನಡೆಸಿಕೊಂಡು ಬಂದು ತನ್ನ ವಾಹನವನ್ನು ಎನ್ ಎಚ್ 04 ರಸ್ತೆಯಿಂದ ಹರಿಹರ ಸಮ್ಮಸಗಿ ಕೂಡು ರಸ್ತೆಗೆ ಬರಲು ರಸ್ತೆಯಲ್ಲಿ ವಾಹನಗಳು ಬರುತ್ತವೆಯೋ? ಇಲ್ಲವೋ ಅನ್ನುವದನ್ನು ಗಮನಿಸದೇ ತನ್ನ ವಾಹನವನ್ನು ಜೋರಾಗಿ ನಡೆಸಿಕೊಂಡು ಬಂದವನೇ ಎಣ್ಣಿಹೊಸಳ್ಳಿ ಕಡೆಯಿಂದ ಹರಿಹರದ ಕಡೆಗೆ ಬರುತ್ತಿದ್ದ ಚನ್ನಬಸಪ್ಪ ಇವರಿದ್ದ ಟಿ ವಿ ಎಸ್ ಎಕ್ಸ ಎಲ್ ಮೋಟಾರ ಸೈಕಲ್ ಗೆ ಜೋರಾಗಿ ಡಿಕ್ಕಿ ಮಾಡಿ ಅಪಘಾತ ಪಡಿಸಿ ಎಡಕಾಲಿಗೆ, ಮುಖಕ್ಕೆ ಹಿಂದೆಲೆಗೆ, ಮರಣಾಂತಿಕ ಗಾಯ ನೋವುಗಳು ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿದ್ದಲ್ಲದೇ, ಅಪಘಾತದ ಸುದ್ದಿಯನ್ನು ಹತ್ತಿರದ ಪೊಲೀಸ ಠಾಣೆಗೆ ತಿಳಿಸದೇ ಘಟನಾ ಸ್ಥಳದಿಂದ ಹಾಗೇ ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬ್ಯಾಡಗಿ ಪೊಲೀಸ್
ಠಾಣೆ ಅಪರಾಧ ಸಂಖ್ಯೆ:128/2020 ಕಲಂ: 287,
338 IPC.
ದಿನಾಂಕ: 22-12-2020 ರಂದು ಬ್ಯಾಡಗಿ ತಾಲೂಕ ಕಾಟೇನಹಳ್ಳಿ ಗ್ರಾಮದಲ್ಲಿ ಸರಕಾರದಿಂದ ಕುಡಿಯುವ ನೀರಿನ ಸಲುವಾಗಿ ಬೋರ ಕೊರೆಯಿಸಲು ಬೋರಿನ ಗಾಡಿ ನಂ. ಕೆಎ-63 ಎಂ-6408 ನೇದ್ದು ಬಂದಿದ್ದು ಗ್ರಾಮದ ಗುಡ್ಡದ ಓಣಿಯಲ್ಲಿ ಬೋರನ್ನು ಕೊರೆದು ನಂತರ ಮುಂಜಾನೆ 07-00 ಘಂಟೆ ಸುಮಾರಿಗೆ ಬೊರಿನ ಗಾಡಿ ನಂ. ಕೆಎ-63 ಎಂ-6408 ನೇದ್ದರ ಚಾಲಕ ವ ಆಪರೇಟರ್ ಇತನು ಬೊರಿನಿಂದ ಪೈಪನ್ನು ತೆಗೆಯುವಾಗ ಅಜಾಗರೂಕತೆಯಿಂದ ಮತ್ತು ನಿರ್ಲಕ್ಷ್ಯತನದಿಂದ ಏಕಾಏಕಿ ಬೊರಿನ ಗಾಡಿಯ ಎಕ್ಸಿಲೇಟರನ್ನು ಅತಿಯಾಗಿ ರೇಜ ಮಾಡಿದ್ದರಿಂದ ಬೋರಿನ ಗಾಡಿಯಿಂದ ಪೈಪ ಕಳಚಿ ಲಕ್ಷ್ಮಣ ತಂದೆ ವೀರಭದ್ರಪ್ಪ ಅಮಾತಿ ವಯಾ:40 ವರ್ಷ ಇತನ ಮೈಮೆಲೆ ಬೀಳುವಂತೆ ಮಾಡಿ ಎಡಗಡೆ ಪಕ್ಕಡಿಗೆ ಮತ್ತು ಎಡಗಾಲ ಮೊಣಕಾಲ ಕೇಳಗೆ ಭಾರಿ ಸ್ವರೂಪದ
ಗಾಯಗಳನ್ನು
ಪಡಿಸಿದ್ದು
ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಹಾನಗಲ್ಲ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ:231/2020 ಕಲಂ: 279,337,304(A),338 IPC.
© 2017 Haveri District Police. All rights reserved