ಕುಮಾರಪಟ್ಟಣಂ ಪೊಲೀಸ್
ಠಾಣೆ ಅಪರಾಧ ಸಂಖ್ಯೆ:93/2020 ಮಹಿಳೆ ಕಾಣೆ.
ಕುಮಾರಿ: ಸುಚಿತ್ರಾ
ತಂದೆ ಮಂಜಪ್ಪ ಹೊಳಲು ವಯಾ: 19 ವರ್ಷ ಜಾತಿ: ಹಿಂದೂ ನಾಯಕ ಉದ್ಯೋಗ: ಮನೆಕೆಲಸ ಸಾ||ಕವಲೆತ್ತು
ತಾ||ರಾಣೇಬೆನ್ನೂರ ಇವಳು ದಿನಾಂಕ:26/12/2020 ರಂದು 18-00 ಗಂಟೆಯ ಸುಮಾರಿಗೆ ಕವಲೆತ್ತು ಗ್ರಾಮದ ತನ್ನ ವಾಸದ ಮನೆಯಲ್ಲಿ ತನ್ನ ತಾಯಿಗೆ ಕವಲೆತ್ತು ಗ್ರಾಮದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು, ತನ್ನ ಚಿಕ್ಕಪ್ಪನ ಮನೆಗೆ ಹೋಗದೇ, ಪರ್ತ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದವಳನ್ನ
ಹುಡುಕಿಕೊಡಬೇಕೆಂದು ಕಾಣೆಯಾದವಳ ತಾಯಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು
ಕಾನೂನು ತನಿಖೆ ಕೈಗೊಳ್ಳಲಾಗಿದೆ.
ಹಲಗೇರಿ ಪೊಲೀಸ್
ಠಾಣೆ ಅಪರಾಧ ಸಂಖ್ಯೆ:146/2020 ಕಲಂ: 279,304(A)
IPC.
ಮಾಬುಲಿ ತಂದೆ ದಿಲೀಪಸಾಬ ಬಳಿಗಾರ ಸಾ||ಎ.ಕೆ.ಜಿ ಕಾಲೋನಿ ಕೋರ್ಟ ಹಿಂಭಾಗ ರಾಣೆಬೆನ್ನೂರು ಇವನು ದಿನಾಂಕ:26-12-2020 ರಂದು ರಾತ್ರಿ 08:30 ರಿಂಧ 08:45 ಗಂಟೆ ಸುಮಾರಿಗೆ ಹಲಗೇರಿ ತುಮ್ಮಿನಕಟ್ಟಿ ರಸ್ತೆಯ ಮೇಲೆ ತಾನು ನಡೆಸುತ್ತಿದ್ದ ಓಮಿನಿ ಕಾರ್ ನಂ ಕೆಎ-17 ಎಂ-2838 ನೇದ್ದನ್ನು
ಹಲಗೇರಿ ಕಡೆಯಿಂದ ತುಮ್ಮಿನಕಟ್ಟಿಗೆ ಹೋಗುವ ಕುರಿತು ಅತೀ ಜೋರಾಗಿ ವ ತಾತ್ಸಾರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆಯ ತುಂಬಾ ಹೊರಳಾಡಿಸಕೊಂಡು ಬಂದವನೆ ಕುಪ್ಪೇಲೂರು ಕೆ.ಇ.ಬಿ ಗ್ರಿಡ್ ಹತ್ತಿರ
ರಸ್ತೆಯ
ಬದಿಗೆ ಕಚ್ಚಾ ರಸ್ತೆಗೆ ಹೊಂದಿ ಕುರಿಗಳನ್ನು ಹೊಡೆದುಕೊಂಡು ಹೊರಟಿದ್ದ ಸಿದ್ದಪ್ಪ ತಂದೆ ಬಸಪ್ಪ ಬಳಗಾವಿ ವಯಾ-53 ವರ್ಷ ಸಾ||ಕುಪ್ಪೇಲೂರು ಇವನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಎಡಗಾಲಿ ಎಡತಲೆಗೆ ಭಾರಿ ರಕ್ತಗಾಯಪೆಟ್ಟು ಗೊಳಿಸಿ ಸ್ಥಳದಲ್ಲಿಯೇ ಮರಣ ಪಡಿಸಿದ್ದಲ್ಲದೇ ಕೆಲವು ಕುರಿಗಳಿಗೆ ಗಾಯ ಪೆಟ್ಟು ಗೊಳಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಆಡೂರ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ:185/2020 ಮಹಿಳೆ ಕಾಣೆ.
ಕು|| ಅಕ್ಷತಾ ತಂದೆ ರಾಮಪ್ಪ ಬಾಗಣ್ಣನವರ ವಯಾ.18 ವರ್ಷ 5 ತಿಂಗಳು ಉದ್ಯೋಗ:ವಿದ್ಯಾರ್ಥಿ ಸಾ||ಹೇರೂರ ತಾ||ಹಾನಗಲ್ಲ
ಇವಳು ದಿನಾಂಕ: 26/12/2020 ರಂದು ರಾತ್ರಿ 01-00 ಗಂಟೆ ಸುಮಾರಿಗೆ ಮನೆಯಲ್ಲಿ ಎಲ್ಲರು ಮಲಗಿಕೊಂಡ ಸಮಯದಲ್ಲಿ ಮನೆಯಲ್ಲಿ ಯಾರಿಗು ಹೇಳದೆ ಕೇಳದೆ ಮನೆಯಿಂದಾ ಹೋದವಳು ವಾಪಸ್ಸ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಈ ಬಗ್ಗೆ ತಮ್ಮ ಊರಲ್ಲಿ ಹಾಗೂ ತಮ್ಮ ಸಂಬಂಧಿಕರ ಊರುಗಳ ಲ್ಲಿ ಈವರೆಗೆ ತಮ್ಮ ಮಗಳಿಗೆ ಹುಡುಕಾಡಿದರು ಸಹಾ ಪತ್ತೆ ಆಗದೆ ಇರುವುದರಿಂದ ಕಾಣೆಯಾದ ನನ್ನ ಮಗಳನ್ನ ಪತ್ತೆಮಾಡಿಕೊಡುವಂತೆ
ಕೊರಿ ಕಾಣೆಯಾದವಳ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪಿರ್ಯಾದಿ ಸ್ವಿಕರಿಸಿ ಪ್ರಕರಣ ದಾಖಲಿಸಿಕೊಂಡು
ಕಾನೂನು ತನಿಖೆ ಕೈಗೊಳ್ಳಲಾಗಿದೆ.
ಹಾನಗಲ್ಲ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ:235/2020
ಕಲಂ: 380,454,457 IPC.
ಹಾನಗಲ್ಲ ಪಿಎಸ್ ಹದ್ದಿ ಪೈಕಿ ಬೆಳಗಾಲಪೇಟೆ ಗ್ರಾಮದ ಕಾಂತೇಶ ಬಾರ್ ಮತ್ತು ರೆಸ್ಟೋರೆಂಟದ ಕಿಡಕಿಯ ಶೆಟರ್ಸಗೆ ಹಾಕಿದ್ದ ಕೀಲಿಯನ್ನು ದಿನಾಂಕ; 24-12-2020 ರಂದು ರಾತ್ರಿ 11-00 ಘಂಟೆಯಿಂದ
ದಿನಾಂಕ; 25-12-2020 ರಂದು ಬೆಳಿಗ್ಗೆ 09-45 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಮುರಿದು ಬಾರಿನ ಒಳಗಡೆ ಬಂದು ಕೌಂಟರ್ ಡ್ರಾದಲ್ಲಿಟ್ಟಿದ್ದ 68,000/- ರೂಗಳು ನಗದು ಹಣ
ಹಾಗೂ ಹಿಂದಿನ ಸ್ಟಾಕ ರೂಮಿನ ಟೇಬಲ್ದ ಎರಡು ಡ್ರಾಗಳನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ತೆರೆದು ಅವುಗಳಲ್ಲಿ ಇಟ್ಟಿದ್ದ 5,00,000/- ರೂಗಳು ನಗದು ಹಣ
ಹೀಗೆ ಒಟ್ಟು 5,68,000/- ರೂಗಳು ನಗದು ಹಣವನ್ನು ಮತ್ತು
ಬಾರ್ನ ಹೊರಗಡೆ ಮತ್ತು ಒಳಗಡೆ ಅಳವಡಿಸಿದ್ದ ಸಿ.ಸಿ ಕ್ಯಾಮರಾದ ಡಿ.ವ್ಹಿ.ಆರ್ ಅ:ಕಿ:1000/- ರೂ ಕಿಮ್ಮತ್ತಿನದು ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:26/2020 ವ್ಯಕ್ತಿ ಸಾವು.
© 2017 Haveri District Police. All rights reserved