• Home
  • About Us
    • Haveri District Police
    • Our Officers
    • Past SPs
    • Photo Gallery
    • Haveri District Map
  • Organization
    • District Police Office
    • Organizational Setup
    • Haveri Sub – Division
    • Ranbennur Sub – Division
    • Shiggavi Sub – Division
  • Traffic
    • Traffic Rules
    • Traffic Fines
    • Traffic Signals
  • Know about
    • District Armed Reserve
    • District Crime Record Bureau
    • District Crime Intelligence Bureau
    • District Special Branch
    • Cyber Economic and Narcotic Crime Police Station
    • Circulars
  • Services
    • District Police Complaint Authority
    • Police Seva Portal
    • Police Verification Certificate
    • SAKALA Services
    • Police Clearance Certificate
    • Passport
  • RTI
  • FAQ
  • Contact Us

Daily News

ಹಾವೇರಿ ಜಿಲ್ಲಾ ಪೊಲೀಸ್
ಅಪರಾಧಗಳ ಸುದ್ದಿ

ದಿನಾಂಕ: 31-12-20


ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:94/2020 ಕಲಂ: INDIAN MOTOR VEHICLES ACT, 1988 (U/s-134(A&B),187); 338, 279, 337 IPC.

               ದಿನಾಂಕ: 30/12/2020 ರಂದು 16-00 ಗಂಟೆಯ ಸುಮಾರಿಗೆ ಮಂಜಪ್ಪ ತಂದೆ ಬಸವಂತಪ್ಪ ಕೊರಟಿಕೇರಿ ವಯಾ 40 ವರ್ಷ ಸಾ|| ಚಳಗೇರಿ ತಾ|| ರಾಣೆಬೆನ್ನೂರ ಇವರು ತಮ್ಮ ಮೋಟಾರ ಸೈಕಲ್ ನಂಬರ: ಕೆಎ-68/ಹೆಚ್-4112 ರಲ್ಲಿ ಕರೂರ ಕ್ರಾಸ್ ಕಡೆಯಿಂದ ಮಾಕನೂರ ಕ್ರಾಸ್ ಕಡೆಗೆ ಎನ್.ಹೆಚ್-04 ರಸ್ತೆ ರಾಣೆಬೆನ್ನೂರ ಕಡೆಯಿಂದ ಸರ್ವೀಸ್ ರಸ್ತೆಗೆ ಕೂಡುವ ರಸ್ತೆಯ ಸಮೀಪ ಬರುತ್ತಿದ್ದಾಗ ಮಜಡಾ ಗಾಡಿ ನಂ ಕೆಎ-53/7337 ನೇದ್ದರ ಚಾಲಕನು ತನ್ನ ಗಾಡಿಯನ್ನು ಮಾಕನೂರ ಕ್ರಾಸ್ ಕಡೆಯಿಂದ ಕರೂರ ಕ್ರಾಸ್ ಕಡೆಗೆ ಅತೀ ಜೋರಿನಿಂದ ಅತೀ ಜೋರಿನಿಂದ ನಿರ್ಲಕ್ಷ್ಯ ತಾತ್ಸರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ಮೋಟಾರ ಸೈಕಲ್ಲಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಮಂಜಪ್ಪನಿಗೆ ಗಂಭೀರ ಗಾಯಪಡಿಸಿ, ಗಾಯಾಳುವಿನ ಉಪಚಾರಕ್ಕೆ ಸಹಕರಿಸದೇ ಸಂಗತಿಯನ್ನು ಠಾಣೆಗೆ ತಿಳಿಸದೇ ಮಜಡಾ ಗಾಡಿಯನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:135/2020 ಕಲಂ: 420 IPC.

                 ಅನಿತಾ ಉಕ್ಕಳಿ ಸಾ|| ಬ್ಯಾಡಗಿ ಇವರು ಪ್ಯಾಕೇಜ್ದ್ ಕುಡಿಯುವ ನೀರು ಯೋಜನೆಗೆ ಐ.ಎಸ್. ಪ್ರಕಾರ 14543:2016 ಇತ್ತೀಚಿನ ಎಸ್,ಟಿ,ಐ ನೊಂದಿಗೆ ಪ್ರಯೋಗಾಲಯವನ್ನು ಸ್ಥಾಪಿಸಲು ಉದ್ದೇಶಿಸಿದ್ದು ಈ ಯೋಜನೆ ಸ್ಥಾಪಿಸಲು ಅವಶ್ಯಕವಾದ ವಸ್ತುಗಳು, ಸಲಕರಣೆಗಳನ್ನು  ಮಾತುಕತೆಯ ಮೂಲಕ ಅಂಬುದ ಶುಕ್ಲಾ ಅಹಮದಾಬಾದ ಇವರೊಂದಿಗೆ ಮಾತುಕತೆ ಮಾಡಿದ್ದು ಅದರಂತೆ ಕುಡಿಯುವ ನೀರು ಯೋಜನೆಗೆ ಒಪ್ಪದದಂತೆ  ದಿನಾಂಕ:02-11-2019 ರಂದು 2,00,000/- ರೂಗಳನ್ನು  ಹಾಗೂ ಮತ್ತೆ ದಿನಾಂಕ:24-12-2019 ರಂದು 50,000/- ರೂ,ಗಳನ್ನು ಅಂಬುದ ಇವರ ಖಾತೆಗೆ ವರ್ಗಾವಣೆ ಮಾಡಿದ್ದು ಲ್ಯಾಬ್ ಮತ್ತು ವಸ್ತುಗಳನ್ನು ಒಪ್ಪದದಂತೆ 6-7 ವಾರಗಳಲ್ಲಿ ತಲುಪಿಸಬೇಕಾಗಿದ್ದು ತಲುಪಿಸದೇ ಹಾಗೂ ಪೋನ್ ಮಾಡಿದಾಗ ಸರಿಯಾಗಿ ಸ್ಪಂದಿಸದೇ ಇರುವದರಿಂದ ಹಾಗೂ ನೋಟಿಸ್ಗೂ ಸಹ ಉತ್ತರವನ್ನು  ಭಾರಿ ನಷ್ಟವನ್ನು ಮಾಡಿ  ಮೋಸ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:136/2020 ಕಲಂ:143,147,148,307,323,324,504,506,149 IPC.

                  ಮಾಲತೇಶಗೌಡ ಶಂಕರಗೌಡ ಪಾಟೀಲ ಇವರು ದಿನಾಂಕ: 30/12/2020 ರಂದು 20-30 ಗಂಟೆ ಸುಮಾರಕ್ಕೆ ಗುಳಿಗೆ ತರಲು ರಟ್ಟೀಹಳ್ಳಿ ಶಹರದ ಹಳೆ ಬಸ್ಟ್ಯಾಂಡ ಹತ್ತಿರದ ಕಾರ್ತಿಕ್ ಮೆಡಿಕಲ್ ಶಾಪ್ ಹತ್ತಿರ ಬೈಕ ನಿಲ್ಲಿಸಿ ಮೆಡಿಕಲ್ ಶಾಪ್ ಕಡೆಗೆ ಹೋಗುತ್ತಿದ್ದಾಗ, ಕಾಸಿಮ್ ಅಬುಸಾಲಿಯಾ ಕಾಜಿ ಹಾಗೂ ಇವರ ಸಂಗಡಿಗರು ಎಕಾಏಕಿ ಗುಂಪು ಕಟ್ಟಿಕೊಂಡು ಕೇಕೆ ಹೊಡೆಯುತ್ತಾ ಬಂದವರೇ ಮಾಲತೇಶಗೌಡನಿಗೆ ಏನ್ರಲೇ ಸೂಳೆ ಮಕ್ಕಳ್ರ ಮೊಬೈಲ್ನಲ್ಲಿ ಸ್ಟೇಟಸ್ ಹಾಕುತ್ತೀರ, ನಿಮ್ಮ ತಾಯಿನ ಹಡ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಕೊಲೆ ಮಾಡುವ ಉದ್ದೇಶದಿಂದ, ಪೈಕಿ ಕಾಸಿಮ್ ಮಾಲತೇಶಗೌಡನಿಗೆ ನಿನ್ನನ್ನು ಇಲ್ಲಿಯೇ ಮುಗಿಸಿಬಿಸುತ್ತೇನೆ ಅಂತಾ ಹೇಳುತ್ತಾ ತನ್ನ ಕೈಯಲ್ಲಿ ಹಿಡಿದುಕೊಂಡ ಚಾಕುವಿನಿಂದ ಕುತ್ತಿಗೆಗೆ ಹೊಡೆಯಲು ಬಂದಾಗ ತಪ್ಪಿಸಿಕೊಂಡ ಕಾಲಕ್ಕೆ ಚಾಕುವಿನ ಹೊಡೆತವು ಎಡ ಕಿವಿ ಹತ್ತಿರ ಬಿದ್ದು ಕಿವಿ ಹರಿದು ರಕ್ತ ಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಹಾಗೂ ಕೆಳಕ್ಕೆ ಕೆಡವಿಕೊಂಡು ಕೈಯಿಂದ ಕಾಲಿನಿಂದ ಜಾಡಿ ಜಾಡಿಸಿ ಒದ್ದು ದುಃಖಾಪತ್ ಪಡಿಸಿದ್ದಲ್ಲದೇ, ಇದೇ ಕಾಲಕ್ಕೆ ಅಲ್ಲೇ ಇದ್ದ ರಮೇಶ ಮಾಸೂರ, ಪ್ರಶಾಂತ ಹಿತ್ತಲಮನಿ, ಮಂಜು ಈಸೂರ, ಮೃತ್ಯಂಜಯ ಬೆಣ್ಣಿ, ನವೀನ ಇವರೆಲ್ಲರಿಗೂ ಸಹ ಬಡಿಗೆ, ಚಾಕು, ಕಲ್ಲಿನಿಂದ ಹೊಡೆದು ಗಾಯ ಪಡಿಸಿ, ನಿಮ್ಮನ್ನು ಒಬ್ಬೊಬ್ಬರನ್ನು ಸೀಳಿ ಬಿಡುತ್ತೇವೆ ಅಂತ ಜೀವದ ಧಮಕಿ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:34/2020 ವಿಷ ಸೇವಿಸಿ ಮಹಿಳೆ ಆತ್ಮ ಹತ್ಯೆ.

               ಕಲ್ಲವ್ವ ಕೋಂ ಹನುಮಂತಪ್ಪ ಹೊಟ್ಟೆಪ್ಪನವರ 50 ವರ್ಷ ಉದ್ಯೋಗ ಮನೆಕೆಲಸ, ಸಾ|| ಕೂರಗುಂದ ತಾ: ಹಾವೇರಿ ಇವಳಿಗೆ ಒಂದು ವರ್ಷದಿಂದ ಹೊಟ್ಟೆ ನೋವಿನ ಖಾಯಿಲೆ ಇದ್ದು ಈ ಬಗ್ಗೆ ಹಲವಾರು ಕಡೆ ತೋರಿಸಿದರು ಗುಣವಾಗಿರಲಿಲ್ಲ, ಅದನ್ನೆ ಮನಸ್ಸಿಗೆ ಹಚ್ಚಿಕೊಂಡಿದ್ದಳು ದಿನಾಂಕ 30-12-2020 ರಂದು ರಾತ್ರಿ 08-00 ಗಂಟೆಗೆ ತನ್ನ ಮನೆಯಲ್ಲಿದ್ದಾಗ ಹೊಟ್ಟೆನೋವು ಬಂದು ಬಾದೆಯನ್ನು ತಾಳಲಾದರೆ ಯಾವುದೋ ವಿಷಕಾರಕ ಎಣ್ಣೆಯನ್ನು ಕುಡಿದಿದ್ದು ಅವಳಿಗೆ ಉಪಚಾರಕ್ಕೆ  ಗುತ್ತಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ಹೆಚ್ಚಿನ ಉಪಚಾರಕ್ಕೆಂದು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದಾಗ ಉಪಚಾರ ಫಲಿಸದೆ ರಾತ್ರಿ 12-00 ಗಂಟೆಗೆ ಮರಣ ಹೊಂದಿರುತ್ತಾಳೆ ವಿನಃ ಮೃತಳ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲಾ ಅಂತಾ ಶಿವರಾಜ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

© 2017 Haveri District Police. All rights reserved

Design by W3layouts