ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:02/2021 ಕಲಂ:;
SC AND THE ST (PREVENTION OF
ATTROCITIES) ACT, 1989 (U/s-3(1)(r)); 143, 147, 447, 323, 324, 504, 506, 149 IPC.
ಬರಮಪ್ಪ ಹರಣಗೇರಿ ಸಾ|| ಕುದರಿಹಾಳ ಹಾಗೂ ದಂಡೆಪ್ಪ ನೀಲಪ್ಪ ವಗ್ಗಣ್ಣನವರ ಹಾಗೂ
ಇವರ ಸಹಚರರು ಒಂದೇ ಊರಿನವರು ಇದ್ದು ಬರಮಪ್ಪ ಹರಣಗೇರಿ ಇವರು ಇತ್ತೀಚೆಗೆ
ನಡೆದ ಗ್ರಾಮಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತನಾಗಿದ್ದು
ದಂಡೆಪ್ಪ ಹಾಗೂ ಅವರ ಸಹಚರರು ಬರಮಪ್ಪನ ಮೇಲೆ ಸಿಟ್ಟನ್ನು ಇಟ್ಟುಕೊಂಡು ಬರಮಪ್ಪ ಜಮೀನದಲ್ಲಿ ಕೆಲಸ ಮಾಡುತ್ತಿದ್ದ ಜಮೀನಿಗೆ 05-01-2021
ರಂದು 13-00 ಗಂಟೆಗೆ
ಗೈರಕಾಯ್ದೆಶೀರ ಮಂಡಳಿಯಾಗಿ ಅಕ್ರಮ ಪ್ರವೇಶ ಮಾಡಿ ಬರಮಪ್ಪಗೆ ಇವನ ಹೆಂಡತಿನ ಹಡ
ತಳವಾರ ಸೂಳೆ ಮಗನ ಅಂತಾ ಜಾತಿ ನಿಂದನೆ ಮಾಡಿ ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದು ತಲೆಗೆ ರಕ್ತಗಾಯ ಮತ್ತು ಮೈಕೈಗೆ ಒಳನೋವನ್ನುಂಟು ಮಾಡಿ ಇನ್ನೊಮ್ಮೆ ಕೊಂದೇ ಬಿಡುತ್ತೇವೆ ಅಂತಾ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:06/2021 ಕಲಂ: 506,509,504,149,147,143,447,323
IPC.
ಶಡಕ್ಷರಯ್ಯ ರುದ್ರಯ್ಯ ಹಿರೇಮಠ ಸಾ|| ಮುಳತಳ್ಳಿ ಹಾಗೂ ಈರಯ್ಯ ಸಿದ್ದಯ್ಯ ಹಿರೇಮಠ
ಇವರಿಬ್ಬರು ಸಂಬಂದಿಗಳಿದ್ದು ದಿನಾಂಕ : 23/12/2020 ರ ಮುಂಜಾನೆ 10 ಘಂಟೆ ಈರಯ್ಯ
ಇವರ ಮನೆಯ ಹಿತ್ತಲಿನ ಜಾಗೆಯನ್ನು ಶಡಕ್ಷರಯ್ಯ ಹಾಗೂ ಅವರ ಸಹಚರರು ಕೂಡಿಕೊಂಡು ಕೈಯಲ್ಲಿ ಗುದ್ದಲಿ ಗ್ವಾರಿ ಹಾರಿಯನ್ನು ಹಿಡಿದುಕೊಂಡು ಅತಿ ಕ್ರಮ ಪ್ರವೇಶ ಮಾಡಿ ಮನೆಯ ಹಿತ್ತಲಿನ ಜಾಗೆಯನ್ನು ಅಗೆಯುತ್ತಿದ್ದಾಗ ಕೇಳಲು ಹೋದ ಈರಯ್ಯ ಹಾಗೂ ಹೆಂಡತಿ ಕವಿತಾ ಇವರಿಗೆ ಅವಾಚ್ಯವಾಗಿ ಬೈದು ಶಡಕ್ಷರಯ್ಯ ಹಾಗೂ ಅವರ ಸಹಚರರು ಕೂಡಿಕೊಂಡು ದೂಡಾಡಿದ್ದು ಅಲ್ಲದೆ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು
ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:07/2021 ಮಹಿಳೆ ಕಾಣೆ.
ಕು|| ಸಿಂದೂ ತಂದೆ ಶ್ರಿಕಾಂತ ಸಾವಕ್ಕನವರ ವಯಾ.19 ವರ್ಷ ಉದ್ಯೋಗ.ವಿದ್ಯಾರ್ಥಿ
ಸಾ||ಶ್ಯಾಡಗುಪ್ಪಿ ತಾ||ಹಾನಗಲ್ಲ ಇವಳು ದಿನಾಂಕ: 05/01/2021 ರಂದು ಮುಂಜಾನೆ 08-30 ಗಂಟೆ ಸುಮಾರಿಗೆ ಮನೆಯಲ್ಲಿ ಅಕ್ಕಿಆಲೂರ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವಳು ಈ
ವರಗೆ ಮನೆಗೆ ವಾಪಸ್ಸ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಈ
ಬಗ್ಗೆ ತಮ್ಮ ಊರಲ್ಲಿ ಹಾಗೂ ತಮ್ಮ ಸಂಬಂಧಿಕರ ಊರುಗಳಲ್ಲಿ ಈವರೆಗೆ ತಮ್ಮ ಮಗಳಿಗೆ ಹುಡುಕಾಡಿದರು ಸಹಾ ಪತ್ತೆ ಆಗದೆ ಇರುವುದರಿಂದ ಕಾಣೆಯಾದ ನನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ಕಾಣೆಯಾದವಳ ತಂದೆ ಶ್ರೀಕಾಂತ
ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.
© 2017 Haveri District Police. All rights reserved