ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:07/2021 ಕಲಂ:INDIAN MOTOR VEHICLES ACT, 1988 (U/s-134(A&B),187,115,177); 279,337,304(A) IPC.
ದಿನಾಂಕ: 24/01/2021 ರಂದು 17-15 ಗಂಟೆಯ ಸುಮಾರಿಗೆ ಕುಮಾರಪಟ್ಟಣಂ ಪೊಲೀಸ್ ಠಾಣಾ ಹದ್ದು ದಾವಣಗೇರಿ-ರಾಣೆಬೆನ್ನೂರ ಎನ್ಎಚ್04 ರಸ್ತೆಯ ಮೇಲೆ ಹರಿಹರ ಸಮ್ಮಸಗಿ ರಸ್ತೆ ಕೂಡು ರಸ್ತೆಯ ಸಮೀಪ ಯಾವುದೋ ಟಿಪ್ಪರ್ ವಾಹನದ ಚಾಲಕನು ತನ್ನ ಟಿಪ್ಪರ ವಾಹನವನ್ನು ಎಣ್ಣಿಹೊಸಳ್ಳಿ ಕ್ರಾಸ್ ಕಡೆಯಿಂದ ಅತೀ ಜೋರಿನಿಂದ ನಿರ್ಲಕ್ಷ್ಯ ತಾತ್ಸರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ಕೂಡು ರಸ್ತೆಯ ಹತ್ತಿರ ಏಕಮುಖ ರಸ್ತೆಯ ಮೇಲೆ ಒಮ್ಮೇಲೆ ಪ್ಲೈ ಓವರ್ ಎನ್ಹೆಚ್-04 ರಸ್ತೆಗೆ ಹತ್ತಿಸಿ ಮೋಟಾರ ಸೈಕಲ್ ನಂ ಕೆಎ: 68/ಎಚ್-4017 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಮೋಟಾರ ಸೈಕಲ್ ಸವಾರ ನಾಗರಾಜ ಹನುಮರಡ್ಡಿ ಕಲಕಟ್ಟಿ ವಯಾ 27 ವರ್ಷ ಸಾ|| ಎರೆಕುಪ್ಪಿ ತಾ|| ರಾಣೆಬೆನ್ನೂರ ನೇದ್ದವರಿಗೆ ತಲೆಗೆ, ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಡುವಂತೆ ಮಾಡಿದ್ದಲ್ಲದೇ ಮೋಟಾರ ಸೈಕಲ್ ಹಿಂಬದಿ ಸವಾರ ರೇಖಾ ಕೊಂ ರಮೇಶ ಬಜರಡ್ಡಿ ಸಾ|| ಎರೆಕುಪ್ಪಿ ತಾ|| ರಾಣೆಬೆನ್ನೂರ ಇವರ ಹಣಿಗೆ, ತಲೆಗೆ, ಕೈ, ಕಾಲುಗಳಿಗೆ ಸಾದಾ ಸ್ವರೂಪದ ಗಾಯಪಡಿಸಿ, ಗಾಯಾಳುವಿನ ಉಪಚಾರಕ್ಕೆ ಸಹಕರಿಸಿದೇ ಸಂಗತಿಯನ್ನು ಠಾಣೆಗೆ ತಿಳಿಸದೇ ಪರಾರಿಯಾದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:03/2021 ವ್ಯಕ್ತಿ ಸಾವು.
© 2017 Haveri District Police. All rights reserved