ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:14/2021 ಕಲಂ: 279, 338, 304(A) IPC.
ದಿನಾಂಕ: 27-01-2021 ರಂದು 16-30 ಗಂಟೆ ಸುಮಾರಿಗೆ ಇದರಲ್ಲಿ ನಮೂದ ಮಾಡಿದ ಆರೋಪಿತನು ತಾನು ನಡೆಸುತ್ತಿದ್ದ ಟಿಪ್ಪರ್ ಲಾರಿಯ ನಂಬರ ಕೆ,ಎ-18 / ಸಿ.0744 ನೇದ್ದನ್ನು ಯಲವಿಗಿ ಕಡೆಯಿಂದ ಸವಣೂರ ಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಜನರಿಗೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ತನ್ನ ಎದುರಿನಿಂದ ಅಂದರೆ ಸವಣೂರ ಕಡೆಯಿಂದ ರಸ್ತೆಯ ಸೈಡಿನಲ್ಲಿ ಬರುತ್ತಿದ್ದ ಮೋಟಾರ ಸೈಕಲ್ ನಂಬರ ಕೆ,ಎ-27 /ಇ.ಪಿ-3346 ನೇದ್ದಕ್ಕೆ ಎದುರಿನಿಂದ ಡಿಕ್ಕಿ ಮಾಡಿ ಅಪಘಾತ ಮಾಡಿ ಮೋಟಾರ ಸೈಕಲ್ ಸವಾರ ಸೈಯದ್ಅಜಮತ್ತವುಲ್ಲಾ ತಂದೆ ಸೈಯದ್ಅಸ್ಲಾಂ ಮಕಾಂದರ ವಯಾ; 19 ವರ್ಷ ಇವನ ತಲೆಗೆ ಮೈಕೈಗಳಿಗೆ ಬಲವಾದ ರಕ್ತಗಾಯ ಪಡಿಸಿದ್ದು ಅಲ್ಲದೇ ಮೋಟಾರ ಸೈಕಲ್ ಹಿಂದೆ ಕುಳಿತ ಹಜರತ್ಅಲಿ ತಂದೆ ಆಲಂಖಾನ ಖಾನಜಾದೆ ವಯಾ; 36 ವéರ್ಷ ಇವನಿಗೆ ತಲೆಗೆ ಮೈಕೈಗಳಿಗೆ ಬಲವಾದ ರಕ್ತಗಾಯವನ್ನು ಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.
© 2017 Haveri District Police. All rights reserved