ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:14/2021 ಮಹಿಳೆ ಕಾಣೆ.
ದಿನಾಂಕ; 22-01-2021 ರಂದು ಸಂಜೆ 16.30 ಗಂಟೆಗೆ ಶ್ರೀಮತಿ ರೇಣುಕಾ ಕೋಂ ರಮೇಶ ಗುಳೇದ ವಯಾ : 28 ವರ್ಷ ಮತ್ತು ಮಕ್ಕಳಾದ 1) ಕು:ಬಾಗ್ಯ ತಂದೆ ರಮೇಶ ಗುಳೇದ ವಯಾ : 07 ವರ್ಷ 2) ಕು:ತನುಶ್ರೀ ತಂದೆ ರಮೇಶ ಗುಳೇದ ವಯಾ : 06 ವರ್ಷ ಇವರನ್ನು ಕರೆದುಕೊಂಡು ಇಟ್ಟಂಗಿ ಬಟಗಿ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋದವಳು ವಾಪಸ್ಸ ಮನೆಗೆ ಬಾರದೆ ಮಕ್ಕಳೊಂದಿಗೆ ಎಲ್ಲಿಯೋ ಕಾಣೆಯಾಗಿರುತ್ತಾಳೆ ಅಂತಾ ರಮೇಶ ಲಕ್ಷ್ಮಣ ಗುಳೆದ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.
ಹಿರೆಕೇರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:11/2021 ಮಹಿಳೆ ಕಾಣೆ.
ಸಬಾಅಂಜುಮ್ ನಸ್ರುಲ್ಲಾ ದೊಡ್ಡಮನಿ ವಯಾ:17 ವರ್ಷ 10 ತಿಂಗಳು ಜಾತಿ:ಮುಸ್ಲಿಂ ಉದ್ಯೋಗ:ಮನೆ ಕೆಲಸ ಸಾ:ಹಳೆ ವೀರಾಪುರ ತಾ:ಹಿರೇಕೆರೂರು ಇವಳು ದಿನಾಂಕ-29-01-2021 ರಂದು ಮದ್ಯಾಹ್ನ 15-00 ಗಂಟೆಗೆ ಮನೆಯಿಂದ ತನ್ನ ಗೆಳತಿ ಮುಸ್ಕಾನ್ ತಂದೆ ಮಾಬುಸಾಬ್ ಕೋಡ ಇವಳ ಜೊತೆಯಲ್ಲಿ ಹಳೆ ವೀರಾಪುರ ಗ್ರಾಮದ ಹತ್ತಿರ ಇರುವ ಮಾಬುಸುಬಾನಿ ದರ್ಗಾಕ್ಕೆ ಓತಿಗೆ ಮಾಡಿಸಲು ಹೋಗಿ ಮರಳಿ ಮನೆಗೆ ಬರುವಾಗ ಬಾಬು ಮಹಮದ್ದಲಿ ಮುದ್ದಿನಕೊಪ್ಪ ಇವನು ಸಬಾಅಂಜುಮ್ ಇವಳಿಗೆ ಅಡ್ಡಗಟ್ಟಿ ನಿಲ್ಲಿಸಿ ಬಟ್ಟೆ, ಬಂಗಾರದ ಆಮಿಶ ತೋರಿಸಿ ಯಾವುದೋ ಉದ್ದೇಶದಿಂದ ತಾನು ತೆಗೆದುಕೊಂಡು ಬಂದ ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೋಗಿರುವುದಾಗಿ ಕುಸ್ತಾರಬಾನು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪಿರ್ಯಾದಿ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.
© 2017 Haveri District Police. All rights reserved