ರಾಣೆಬೇನ್ನೂರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:07/2021 ಕಲಂ: 279, 304(A) IPC.
ದಿನಾಂಕಃ31-01-2021 ರಂದು 08-10 ಗಂಟೆಯ ಸುಮಾರಿಗೆ ಮೇಹಬೂಬ ನಿಸಾರಹಮದ್ ನಳಬಂದ ಸಾ ಹಳೆಹುಬ್ಬಳ್ಳಿ ಇವನು ತನ್ನ ಬಾಬತ್ ಟಾಟಾ ಎಸಿ ಗಾಡಿ ನಂಬರ ಕೆಎ-25ಸಿ-9206 ನೆದ್ದನ್ನು ಹರಿಹರ ಕಡೆಯಿಂದ ರಾಣೆಬೆನ್ನೂರ ಕಡೆಗೆ ಅತೀ ಜೋರಿನಿಂದ ಅಜಾಗರೂಕತೆಯಿಂದ, ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನೆ ರಾಣೆಬೆನ್ನೂರ ಹೊಸ ಎಲ್ ಐ ಸಿ ಆಪೀಸ್ ರಸ್ತೆ ಕ್ರಾಸ್ ಹರಿಹರ-ರಾಣೆಬೆನ್ನೂರ ಹಳೇ ಪಿ ಬಿ ರಸ್ತೆ ಮೇಲೆ ಹೊಸ ಎಲ್ ಐ ಸಿ ಕಡೆಗೆ ಹೋಗಲು ಬಲಗಡೆ ತಿರುಗಲು ಯಾವುದೇ ಸಿಗ್ನಲ್ ನೀಡದೇ ಕೈಸನ್ನೆ ಮಾಡದೇ ಹಾಗೇ ತನ್ನ ಗಾಡಿಯನ್ನು ಒಮ್ಮಲೇ ನಿರ್ಲಕ್ಷತನದಿಂದ ಬಲಕ್ಕೆ ತೆಗೆದುಕೊಂಡು ದೇವಗೊಂಡನಕಟ್ಟಿ ಕಡೆಯಿಂದ ರಾಣೆಬೆನ್ನೂರ ಕಡೆಗೆ ಹೋಗುತ್ತಿದ್ದ ಹೊಂಡಾ ಎಚ್ ಎಪ್ ಡಿಲೆಕ್ಸ್ ನಂ;ಕೆಎ-27ಡಬ್ಲೂ-755 ನೆದ್ದಕ್ಕೆ ತನ್ನ ಗಾಡಿಯ ಮುಂದಿನ ಬಲಗಡೆ ಮಿರರ್ ಹಾಗೂ ಬಲಗಡೆ ಬೌಡಿಯಿಂದ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ ಸೈಕಲ್ ಸಮೇತ ನೆಲಕ್ಕೆ ಹಿಂದಲೆ ಹಚ್ಚಿ ಬಿಳುವಂತೆ ಭಾರಿ ರಕ್ತಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:18/2021 ಕಲಂ: 304A, 279, 337 IPC.
ದಿನಾಂಕ: 31-01-2021 ರಂದು ಬೆಳಗಿನ ಜಾವ 03-30 ಗಂಟೆ ಸುಮಾರಿಗೆ ಕಾರ ನಂ. ಕೆಎ-02,ಎಮ್ ಜೆ-7103 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಕಾರನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ಎನ್ ಎಚ್ -48 ರಸ್ತೆ ಹಿಡಿದು ಮೋಟೆಬೆನ್ನೂರು ಸಮೀಪ ಅತೀ ಜೋರಾಗಿ ಮತ್ತು ನಿರ್ಲಕ್ಷ್ಯೆ ತಾತ್ಸಾರನದಿಂದ ನಡೆಸಿಕೊಂಡು ಬಂದು ತನ್ನ ಮುಂದೆ ಹೊರಟಿದ್ದ ಲಾರಿ ಚಾಲಕನು ತಾನು ನಡೆಸುತ್ತಿದ್ದ ಲಾರಿಯನ್ನು ಒಮ್ಮಲೆ ಬ್ರೇಕ್ ಹಾಕಿದ್ದರಿಂದ ತನ್ನ ಕಾರನ್ನು ಕಂಟ್ರೋಲ್ ಮಾಡಲಾಗದೆ ಮುಂದಿನ ಲಾರಿಯ ಹಿಂದಿನ ಬಲ ಭಾಗಕ್ಕೆ ಡಿಕ್ಕಿ ಹೊಡೆದು ಎಕ್ಸಿಡೆಂಟ ಮಾಡಿ ಕಾರಿನಲ್ಲಿದ್ದ ತನ್ನ ಹೆಂಡತಿ ಶ್ವೇತಾ ಪೊಲೀಸ್ ಪಾಟೀಲ್ ಇವರಿಗೆ ಸಾದಾ ಸ್ವರೂಪದ ದುಖಾಪತ್ತಪಡಿಸಿದ್ದು ಅಲ್ಲದೇ ಕಾರಿನಲ್ಲಿದ್ದ ಬಸವರಾಜ ತಂದೆ ಮಹಾರುದ್ರಪ್ಪ ಎಮ್ಮಿ ವಯಾ:61 ವರ್ಷ ಸಾ: ಶಿಗ್ಗಾಂವ ಇವರು ಅಪಘಾತ ಸ್ಥಳದಲ್ಲಿಯೇ ಪ್ರಜ್ಞಾಹೀನರಾಗಿದ್ದು ಸದರಿಯವರಿಗೆ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬೆಳಗಿನ ಜಾವೆ 04-30 ಗಂಟೆಗೆ ವೈದ್ಯರು ಉಪಚರಿಸುವಾಗ ಮರಣ ಹೊಂದಿರುತ್ತಾರೆ ಪುಷ್ಪಾ ಯಲಿಗಾರ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:12/2021 ಕಲಂ:379 IPC.
© 2017 Haveri District Police. All rights reserved