ರಟ್ಟಿಹಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:16/2021 ಕಲಂ: 323, 324, 307, 354, 504, 506, 34 IPC .
ರುದ್ರಯ್ಯ ಚಿದಾನಂದಯ್ಯ ಹಿರೇಮಠ ಇವರ ತಂದೆಯ ಕಡೆಯಿಂದ ಅರುಣಕುಮಾರ ಮೊಹನರಾಯ್ ಸೊಮೆಯವರ ಇವರು2016 ನೇ ಸಾಲಿನಲ್ಲಿ, 1.10.000/ ರೂಪಾಯಿ ಇಸಿದುಕೊಂಡಿದ್ದು ನಂತರ ರುದ್ರಯ್ಯನ ಮನೆಯವರು ಅರುಣಕುಮಾರನಿಗೆ ಹಣ ಕೊಡು ಅಂತಾ ಕೇಳುತ್ತಾ ಬಂದಿದ್ದರೂ ಹಣ ಕೊಡದೆ ಸತಾಯಿಸುತ್ತಾ ಬಂದಿದ್ದು, ಹಾಗೂ ದಿನಾಂಕ: 31/01/2021 ರಂದು ರುದ್ರಯ್ಯನ ತಂದೆಯವರು ಪುನಃ ಹಣ ಕೇಳಿದ್ದು ಈ ವಿಚಾರದಲ್ಲಿ ಹಣ ಕೊಡುವದಿಲ್ಲ ಅಂತಾ ಹೇಳಿದ್ದರಿಂದ ನಂತರ ಅರುಣಕುಮಾರನ ಬೈಕನ್ನು ತಂದು ತಮ್ಮ ಮನೆಯಲ್ಲಿ ಇಟ್ಟು ಹೋಗಿದ್ದಾಗ, ಮಧ್ಯಾಹ್ನ 01-00 ಗಂಟೆಗೆ ಅರುಣಕುಮಾರ ರುದ್ರಯ್ಯನ ಮನೆಗೆ ಬಂದು ಮನೆಯಲ್ಲಿದ್ದ ರುದ್ರಯ್ಯನ ಹೆಂಡತಿ ಹೇಮಾವತಿ ಹಾಗೂ ತಾಯಿ ಗುರುಶಾಂತಮ್ಮ. ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ಬೈದಾಡಿ, ಹಲ್ಲೆ ಮಾಡಿ ಬೈಕನ್ನು ತೆಗೆದುಕೊಂಡು ಹೋಗಿದ್ದು, ನಂತರ ರುದ್ರಯ್ಯನು ಸದರ ವಿಚಾರ ಗೊತ್ತಾಗಿ ದಿನಾಂಕ: 01/02/2021 ರಂದು ಮುಂಜಾನೆ 10-00 ಗಂಟೆಗೆಆರುಣಕುಮಾರನ ಮನೆ ಮುಂದೆ ಹೋಗಿ ತನ್ನ ಹೆಂಡತಿ ಹೇಮಾವತಿ ಹಾಗೂ ತಾಯಿ ಗುರುಶಾಂತಮ್ಮ ಇವರ ಮೇಲೆ ಹಲ್ಲೆ ಮಾಡಿದ್ದರ ವಿಚಾರವಾಗಿ ಕೇಳುತ್ತಿದ್ದಾಗ ಅರುಣಕುಮಾರ ಹಾಗೂ ಅವರ ಮನೆಯವರು ಕೂಡಿಕೊಂಡು ರುದ್ರಯ್ಯನಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ನೆಲಕ್ಕೆ ದೂಡಿ ಕಾಲಿನಿಂದ ಒದ್ದು, ತಲೆಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದಲ್ಲದೇ ಇನ್ನೋಂದು ಸಾರಿ ಹಣ ಕೇಳಿದಿ ಅಂದ್ರ ನಿನ್ನ ಜೀವ ತಗಿಯುತ್ತೇನೆ ಅಂತಾ ಜೀವದ ಧಮಕಿ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:17/2021 ಕಲಂ: 379 IPC .
ಯಾರೋ ಕಳ್ಳರು ದಿನಾಂಕ 20/01/2021 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ 21/01/2021 ರಂದು ಬೆಳಗ್ಗೆ 5 ಗಂಟೆಯ ನಡುವಿನ ಅವದಿಯಲ್ಲಿ ನನ್ನ ಬಾಬತ್ ಸ್ಪ್ಲೆಂಡರ್ ಪ್ಲಸ್ ಮೊಟಾರ್ ಸೈಕಲ್ ನೊಂದಣಿ ಸಂಖ್ಯೆ ಕೆಎ 27/ಇಪಿ 3483 ನೇದ್ದರ ಅ ಕಿ 48000 (ನಾಲವತ್ತೆಂಟ ಸಾವಿರ) ರೂಫಾಯಿ ಮೌಲ್ಯದ ಮೊಟಾರ ಸೈಕಲ್ಲನ್ನು ನಂದಿಹಳ್ಳಿ ಹತ್ತೀರ ಇರುವ ನಮ್ಮ ವಾಸದ ಮನೆಯ ಮುಂದೆ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:18/2021 ಕಲಂ: 379 IPC .
© 2017 Haveri District Police. All rights reserved